ಬೆಂಗಳೂರು,ಫೆ,20,2020(www.justkannada.in): ದಿನನಿತ್ಯ ಬಿಡುವಿಲ್ಲದ ಕೆಲಸದ ಮಧ್ಯೆ ಪೊಲೀಸರು ಹೈರಾಣಾಗ್ತಿದ್ದಾರೆ. ಹೀಗಾಗಿ ಒತ್ತಡ ನಿವಾರಣೆಗಾಗಿ ಮಾನಸಿಕ ಸಧೃಢತೆಗಾಗಿ ಪೊಲೀಸರು ಜುಂಬಾ ಡ್ಯಾನ್ಸ್ ಮೊರೆ ಹೋಗಿದ್ದಾರೆ.
ಹೌದು ಈಶಾನ್ಯ ವಿಭಾಗದ ಪೊಲೀಸರಿಗೆ ಜುಂಬಾ ಡ್ಯಾನ್ಸ್ ಹೇಳಿಕೊಡಲಾಗುತ್ತಿದೆ. ಈಶಾನ್ಯ ವಿಭಾಗದಲ್ಲಿ 900 ಜನ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 300 ಜನರಂತೆ 3 ಶಿಫ್ಟ್ ನಲ್ಲಿ ಪೊಲೀಸರಿಗೆ ಜುಂಬಾ ಡ್ಯಾನ್ಸ್ ತರಬೇತಿ ನೀಡಲಾಗುತ್ತಿದ್ದು ಈ ತರಬೇತಿಗೆ ಇಂದು ನಟ ಪುನೀತ್ ರಾಜ್ ಕುಮಾರ್ ಹಾಗೂ ಕಮಿಷನರ್ ಭಾಸ್ಕರರಾವ್ ಚಾಲನೆ ನೀಡಿದರು.
ಮಾನ್ಯತಾ ಟೆಕ್ ಪಾರ್ಕ್ ಮ್ಯಾನ್ ಪೋ ಕನ್ವೇಷನ್ ಹಾಲ್ ನಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಭಿಮಾಶಂಕರ್ ಗುಳೇದ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಜುಂಬ ಡ್ಯಾನ್ಸ್ ಸ್ಟೆಪ್ ಹಾಕಿದರು. ಇದು ಚರಿತ್ರೆ ಸೃಷ್ಠಿಸೋ ಅವತಾರ ‘ಹ್ಯಾಂಡ್ಸ್ ಅಪ್’ ಹಾಡಿಗೆ ಖಾಕಿ ಪಡೆ ಭರ್ಜರಿ ಡ್ಯಾನ್ಸ್ ಮಾಡಿ ಖುಷಿಪಟ್ಟರು. ಸಿಬ್ಬಂದಿಗಳ ಜತೆ ಹಿರಿಯ ಅಧಿಕಾರಿಗಳು ಸಹ ಸಖತ್ ಸ್ಟೆಪ್ಸ್ ಹಾಕಿದರು.
Key words: Zumba Dance – Bangalore- Northeastern Division – – Relax Mood