ಬೆಂಗಳೂರು,ಜನವರಿ,12,2022(www.justkannada.in): ಕೊರೋನಾ ಹೆಚ್ಚುತ್ತಿರುವ ನಡುವೆ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ಸರ್ಕಾರವನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಕೋರ್ಟ್ ಆದೇಶವನ್ನ ಮಾನ್ಯ ಮಾಡುತ್ತೇವೆ. ಕಾಂಗ್ರೆಸ್ ಗೂ ಕೋರ್ಟ್ ನೋಟೀಸ್ ನೀಡಿದೆ. ಕಾಂಗ್ರೆಸ್ ನವರೇ ಪಾದಯಾತ್ರೆ ನಿಲ್ಲಿಸಬಹುದು. ಎಜಿ ವರದಿ ಬಳಿಕ ಸಿಎಂ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪಾದಯಾತ್ರೆ ತಡೆಯಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯವೂ ಹೌದು. ನಾವು ಪಾದಯಾತ್ರೆಗೆ ಅನುಮತಿ ನೀಡಿಲ್ಲ. ನಾವು ಕೋರ್ಟ್ ಆದೇಶ ಪಾಲಿಸುತ್ತೇವೆ. ಹೈಕೋರ್ಟ್ ನಮಗೆ ಒಂದು ದಿನ ಕಾಲಾವಕಾಶ ನೀಡಿದೆ. ಏನು ಉತ್ತರ ನೀಡಬೇಕು ಎಂದು ಚರ್ಚಿಸುತ್ತೇವೆ. ಕಾಂಗ್ರೆಸ್ ನವರು ಇಂದು ಪಾದಯಾತ್ರೆ ನಿಲ್ಲಿಸಬಹುದು. ಇಲ್ಲದಿದ್ದರೇ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಅರಗ ಜ್ಞಾನೇಂದ್ರ ತಿಳಿಸಿದರು.
Key words: High Court — Congress padayatra-Home Minister- Arag Gyanjendra