ಮೈಸೂರು,ಅಕ್ಟೋಬರ್,13,2021(www.justkannada.in): ಬರಿಗಾಲಿನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟವನ್ನ ಹತ್ತುವ ಮೂಲಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನವರಾತ್ರಿ ಆಚರಣೆ ಹರಕೆ ತೀರಿಸಿದರು.
ಪ್ರತಿ ನವರಾತ್ರಿ ಹಾಗೂ ಆಷಾಢ ಮಾಸದ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರು ಬೆಟ್ಟ ಹತ್ತುವ ಪದ್ದತಿ ಬೆಳಸಿಕೊಂಡಿದ್ದಾರೆ. ಅದೇ ರೀತಿ ಈ ಬಾರಿಯೂ ಬೆಟ್ಟ ಹತ್ತಿದ್ದಾರೆ. ಶೋಭಾ ಕರಂದ್ಲಾಜೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳೀಯ ನಾಯಕರು ಸಾಥ್ ನೀಡಿದರು.
ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶ ಸುರಕ್ಷಿತವಾಗಿ ಇರಬೇಕು. ಉತ್ತರ ಪ್ರದೇಶದ ಸಹ ಪ್ರಭಾರಿ ಆಗುವ ಅವಕಾಶ ನನಗೆ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ದೊಡ್ಡ ಯುದ್ದವೇ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ದೇಶದ ರಾಜಕೀಯ ನಿರ್ಣಯ ಮಾಡುವ ಚುನಾವಣೆ ಇದೆ. ಅಯೋಧ್ಯೆಯಲ್ಲಿ ಶತಮಾನಗಳ ನಮ್ಮ ಶ್ರೀರಾಮನ ಕನಸು ಈಡೇರಲಿದೆ. ಅದಕ್ಕಾಗಿ ಯೋಗೀಜಿಯ ಸರ್ಕಾರ ಮತ್ತೆ ಬರಬೇಕು. ಈ ದೇಶ ನೆಮ್ಮದಿಯಿಂದ ಇರಬೇಕು. ಗಡಿಗಳ ರಕ್ಷಣೆ ಆಗಬೇಕು, ಕೃಷಿಕ ನೆಮ್ಮದಿಯಾಗಿರಬೇಕು ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಸಿದ್ದೇನೆ ಎಂದರು.
ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಈ ವರ್ಷ ದೇಶದಲ್ಲಿ ಉತ್ತಮ ಮಳೆ ಆಗಿ ಕೃಷಿ ಆದಾಯ ಹೆಚ್ಚಾಗಿದೆ. ನಮಗೆ ಪೊಟಾಷ್ ಹೊರ ದೇಶದಿಂದ ಬರುತ್ತೆ. ಕೊರೊನಾ ಕಾರಣಕ್ಕೆ ವಿದೇಶದಿಂದ ಬರುವ ರಸಗೊಬ್ಬರದಲ್ಲಿ ಕೊಂಚ ಕೊರತೆ ಇದೆ. ಮೋದಿ ಸರ್ಕಾರ ಇನ್ನೆರಡು ವರ್ಷದಲ್ಲಿ ರಸಗೊಬ್ಬರದಲ್ಲೂ ಸ್ವಾವಲಂಬಿ ಆಗುವತ್ತ ಕಾರ್ಯಕ್ರಮ ರೂಪಿಸಿದೆ. ಅದರಲ್ಲೂ ಆತ್ಮನಿರ್ಭರ ಆಗುವತ್ತೆ ಹೆಚ್ಚು ಕಾರ್ಖಾನೆಗಳ ಸ್ಥಾಪನೆ ಆಗಯತ್ತಿದೆ. ಈಗ ಎಣ್ಣೆ ತೈಲ ಹೊರತುಪಡಿಸಿ ದೇಶ ಉಳಿದ ವಿಚಾರದಲ್ಲಿ ಆತ್ಮನಿರ್ಭರ ಸಾಧಿಸಿದೆ. ಖಾದ್ಯ ತೈಲದ ವಿಚಾರದಲ್ಲೂ ನಾವು ಸ್ವಾವಲಂಬನೆ ಸಾಧಿಸಲಿದ್ದೇವೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Key words: Union Minister- Shobha Karandlaje-Chamundi Hill – Navratri Celebration