ಮೈಸೂರು,ನವೆಂಬರ್,23,2021(www.justkannada.in): ನವೆಂಬರ್ 24 ರಿಂದ 23 ನೇ ಯುಜಿಸಿ-ಸಿಇಸಿ ಶೈಕ್ಷಣಿಕ ವಿಡಿಯೋ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪ್ರಕೃತಿ ಅಂತರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಸಮಾರಂಭದ ಕುರಿತು ಮಾಹಿತಿ ನೀಡಿದ ಕುಲಪತಿ ಪ್ರೊ. ಜಿ ಹೇಮಂತ್ ಕುಮಾರ್, ನವೆಂಬರ್ 24 ರಿಂದ 27 ರವರೆಗೆ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರ ಉದ್ಘಾಟನಾ ಸಮಾರಂಭ ಕ್ರಾಫರ್ಡ್ ಭವನದಲ್ಲಿ ಜರುಗಲಿದ್ದು, ಸಿಇಸಿ ನಿರ್ದೇಶಕ ಪ್ರೊ.ಜಗತ್ ಭೂಷಣ್ ನಡ್ಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ನಿರ್ಮಿಸಿದ ಶಾರ್ಟ್ ಮೂವಿ ಪ್ರದರ್ಶನ ನಡೆಯಲಿದೆ. ಅತ್ಯುತ್ತಮ ಚಿತ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.
Key words: UGC-CEC -Educational -Video Competition -mysore university-VC-G Hemanth Kumar.
ENGLISH SUMMARY….
UGC-CEC Educational Video Competition and award giving program from Nov. 24: UoM VC
Mysuru, November, 23, 2021 (www.justkannada.in): Prof. G. Hemanth Kumar, Vice-Chancellor, University of Mysore, today informed that the UGC-CEC Educational Video Competition and the award-giving ceremony, and the Nature International Documentary program would be conducted from November 24 to 27.
Addressing a press meet held at the Vignana Bhavana in Manasagangotri today, he informed that the inaugural program will be held at the Crawford Hall, and CEC Director Prof. Jagath Bhushan Nadda will inaugurate.
Short movies produced by students of various colleges will be exhibited. Award will be given to the best short movie, he explained.
Keywords: University of Mysore/ UGC-CEC Educational Video Competition/ award function/ November 24