ಬೆಂಗಳೂರು,ಡಿಸೆಂಬರ್,31,2021(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮೇರೆಗೆ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿದೆ. ಬಂದ್ ಕೈ ಬಿಟ್ಟಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಎಂಇಎಸ್ ನಿಷೇಧಿಸುವಂತೆ ಕನ್ನಡ ಪರ ಹೊರಾಟಗಾರ ಪ್ರತಿಭಟನೆಗಿಳಿದಿದ್ದು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಟಾಳ್ ನಾಗರಾಜ್ ಅವರ ಜತೆ ಮಾತುಕತೆ ನಡೆಸಿ ಬಂದ್ ಕೈ ಬಿಡುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್ ಅನ್ನ ವಾಟಾಳ್ ನಾಗರಾಜ್ ವಾಪಸ್ ಪಡೆದರು. ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂದ್ ಕೈಬಿಟ್ಟಿಲ್ಲ ಮುಂದಕ್ಕೆ ಹಾಕಿದ್ದೇವೆ. ಎಂಇಎಸ್ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದರು. ಹೀಗಾಗಿ ಬಂದ್ ಕೈಬಿಟ್ಟಿದ್ದೇವೆ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ .
ಬಂದ್ ವಾಪಸ್ ಪಡೆಯಲು ಒತ್ತಡ ಬಂದಿತ್ತು ಇಂತಹ ಒತ್ತಡಕ್ಕೆ ನಾನು ಮಣಿಯಲ್ಲ. ಆದರೆ ಸಿಎಂ ಮನವಿ ಮೇರೆಗೆ ಬಂದ್ ವಾಪಸ್ ಪಡೆದಿದ್ದೇವೆ. ಬಂದ್ ಬದಲು ರ್ಯಾಲಿ ಮಾಡುತ್ತೇವೆ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು ಎಂಇಎಸ್ ನಿಷೇಧಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ENGLISH SUMMARY…
“We haven’t withdrawn the protest, we have postponed it”: Vatal Nagaraj
Bengaluru, December 31, 2021 (www.justkannada.in): “We have postponed the Karnataka Bundh upon the request made by Chief Minister Basavaraj Bommai. We have not stepped back from it,” opined pro-Kannada activist Vatal Nagaraj.
Members of the pro-Kannada organizations are protesting across the state, condemning the hooliganism of MES activists and demanding to ban it. The pro-Kannada organizations had also called for a Karnataka Bundh on December 31. However, Chief Minister Basavaraj Bommai spoke to the leaders, including Vatal Nagaraj, and requested them to withdraw their protest.
Following this, Vatal Nagaraj has announced that they have withdrawn their bundh call. Speaking to the media persons, he however insisted that the State Government should initiate action against the MES. “We have not completely stepped back from our protest. The CM has assured to take legal action against the MES. Hence, for the time being, we have withdrawn it. However, we won’t end it here completely,” he informed.
“There was a lot of pressure not to call for the bundh. But I won’t budge to such pressures. However, we have withdrawn it following the Chief Minister’s request. We have decided to take out a rally instead of the bundh. We also demand the government not to consider this lightly. It should compulsorily ban MES,” he demanded.
Keywords: Pro-Kannada activist/ Vatal Nagaraj/ Karnataka Bundh/ postponed
Key words: Karnataka bandh – not given-Kannada fighter- Vatal Nagaraj.