ಬೆಂಗಳೂರು,ಸೆಪ್ಟಂಬರ್,8,2022(www.justkannada.in): ಜನೋತ್ಸವ ಹೆಸರನ್ನ ಬದಲಿಸಿ ಜನಸ್ಪಂದನ ಕಾರ್ಯಕ್ರಮ ಮಾಡಲು ಮುಂದಾಗಿರುವ ಬಿಜೆಪಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಕುಟುಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಎಂ.ಬಿ ಪಾಟೀಲ್, ಬಿಜೆಪಿ ಜನೋತ್ಸವ ಅಲ್ಲ. ಜಲೋತ್ಸವ. ಬೆಂಗಳೂರು ನಗರ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ ವೆನಿಸ್ ಮಾದರಿಯಲ್ಲಿ ಆಗಿದೆ. ಈ ಸ್ಥಿತಿ ಯಲ್ಲಿ ಜನೋತ್ಸವದ ಅಗತ್ಯ ಏನಿದೆ…? ಎಂದು ಪ್ರಶ್ನಿಸಿದ್ದಾರೆ.
3 ವರ್ಷ ಏನು ಮಾಡಿದ್ದಾರೆಂದು ಜನರಿಗೆ ಹೇಳಬೇಕು. ಕಳೆದ 3 ವರ್ಷದಿಂದ ಇವರು ಏನು ಮಡುತ್ತಿದ್ದರು. ಈಗ ಎಚ್ಚರ ಆಯಿತಾ ಸುಮ್ಮನೇ ಗೂಬೆ ಕೂರಿಸುವ ಕೆಲಸ ಬೇಡ. ಮಳೆ ಹಾನಿ ಪರಿಹಾರ ಕಾರ್ಯಕ್ರಮ ಕೈಗೊಳ್ಳಲಿ . ಸಿಎಂ, ಸಚಿವರು ಯುದ್ದೋಪಾದಿಯಲ್ಲಿ ಕೆಲಸ ಮಾಡಲಿ ಎಂದು ಎಂ.ಬಿ ಪಾಟೀಲ್ ಟಾಂಗ್ ನೀಡಿದರು.
ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಎಂದು ಆರೋಪಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಎಂ.ಬಿ ಪಾಟೀಲ್, ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ರೆ ಮೂರು ವರ್ಷ ಏಕೆ ಸುಮ್ಮನಿದ್ದಿರಿ . ಸಿದ್ಧರಾಮಯ್ಯ ಅವಧಿಯಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿತ್ತು. ಕಾರಣಾಂತರ ಅಡೆತಡೆಗಳಿಂದ ಅದು ಸಂಪೂರ್ಣ ಆಗಲಿಲ್ಲ ಎಂದು ತಿಳಿಸಿದರು.
Key words: Bengaluru city – completely- water-Janotsava -situation – MB Patil.