ಭಾರತದಲ್ಲಿ 2009-19ರ ನಡುವೆ ಒಟ್ಟು 600 ಆನೆಗಳು ವಿದ್ಯುತ್ ಸಂಪರ್ಕಕ್ಕೆ ಬಂದು ಮೃತಪಟ್ಟಿವೆ..

ನವದೆಹಲಿ, ಡಿಸೆಂಬರ್ 20, 2021 (www.justkannada.in): ಭಾರತದಲ್ಲಿ ೨೦೦೯ ಹಾಗೂ ೨೦೧೯ರ ನಡುವೆ ೬೦೦ ಆನೆಗಳು ವಿದ್ಯುತ್ ಸಂಪರ್ಕಕ್ಕೆ ಬಂದ ಕಾರಣದಿಂದಾಗಿ ಮೃತಪಟ್ಟಿವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ತಾಪಮಾನ ಬದಲಾವಣಾ ಇಲಾಖೆಯ ಮಾಹಿತಿಯಿಂದ ಬಹಿರಂಗಗೊAಡಿದೆ. ಈ ಪೈಕಿ ೧೧೬ ಆನೆಗಳು ಕರ್ನಾಟಕದಲ್ಲಿ, ೧೧೭ ಒರಿಸ್ಸಾ ಮತ್ತು ೧೦೫ ಆನೆಗಳು ಅಸ್ಸಾಂ ರಾಜ್ಯದಲ್ಲಿ ಮೃತಪಟ್ಟಿವೆ.

ಲಭ್ಯವಾಗಿರುವ ದತ್ತಾಂಶಗಳ ಪ್ರಕಾರ, ಅರುಣಾಚಲ ಪ್ರದೇಶ, ತ್ರಿಪುರಾ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳಲ್ಲಿ ಮಾತ್ರ ಶೂನ್ಯ ಪ್ರಮಾಣದ ಆನೆಗಳ ಸಾವಾಗಿವೆ. ಕರ್ನಾಟಕದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡುತ್ತಾ ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಲವು ಆನೆಗಳ ಅಸಹಜ ಸಾವಿನ ಪ್ರಕರಣಗಳು ನಡೆದಿವೆ ಎಂದು ಖಾತ್ರಿಪಡಿಸಿದ್ದಾರೆ. “ಈ ರೀತಿ ಆನೆಗಳ ಅಸಹಜ ಸಾವಿನ ಪ್ರಮಾಣ ಕಡಿಮೆಯಾಗಿದ್ದರೂ ಸಹ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿ ವರ್ಷ ವಿದ್ಯುತ್ ಸಂಪರ್ಕದಿಂದಾಗಿ ೫-೬ ಆನೆಗಳ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಕೊಡಗಿನಲ್ಲಿ ಈ ವರ್ಷದ ಜುಲೈ ತಿಂಗಳಲ್ಲಿ ನಾಲ್ಕು ಆನೆಗಳು ಮೃತಪಟ್ಟಿವೆ. ಅಕ್ಟೋಬರ್ ೨೦೨೦ರಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಒಳಗಡೆ ಎರಡು ಗಂಡು ಆನೆಗಳು ಮೃತಪಟ್ಟರೆ, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ ಇತರೆಡೆಗಳಲ್ಲಿ ನಾಲ್ಕು ಆನೆಗಳು ಮೃತಟ್ಟವು. ಆನೆಗಳ ಅಸಹಜ ಸಾವಿನ ಸಂಖ್ಯೆ ಬಹಳ ಹೆಚ್ಚಾಗಿವೆ. ಜಮೀನುಗಳ ಮಾಲೀಕರು ಅಳವಡಿಸುವ ವಿದ್ಯುತ್ ಬೇಲಿಗಳ ಸಂಪರ್ಕಕ್ಕೆ ಬರುವ ಕಾರಣದಿಂದಾಗಿ ಆನೆಗಳು ಮೃತಪಡುತ್ತವೆ. ಈ ರೀತಿ ವಿದ್ಯುತ್ ಬೇಲಿಗಳನ್ನು ಅಳವಡಿಸುವ ಮಾಲೀಕರ ಪೈಕಿ ಬಹಳಷ್ಟು ಜನರು ಕಾನೂನುಬಾಹಿರವಾಗಿಯೇ ಮಾಡುತ್ತಿದ್ದು ಅಂತಹವರ ವಿರುದ್ಧ ನಾವು ಪ್ರಕರಣಗಳನ್ನು ದಾಖಲಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಈ ರೀತಿ ವಿದ್ಯುತ್ ಸಂಪರ್ಕಕ್ಕೆ ಬಂದ ಕಾರಣದಿಂದಾಗಿ ಮೃತಪಟ್ಟಿರುವ ಒಟ್ಟು ಆನೆಗಳ ಸಂಖ್ಯೆಯನ್ನು ಕ್ರೋಢೀಕರಿಸಬೇಕಿದೆ,” ಎಂದು ತಿಳಿಸಿದ್ದಾರೆ.

ನಿವೃತ್ತ ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಅವರು ಹೇಳುವಂತೆ ಈ ರೀತಿ ವಿದ್ಯುತ್ ಸಂಪರ್ಕದಿAದಾಗಿ ಆನೆಗಳು ಮೃತಪಟ್ಟ ಶೇ.೭೫ರಷ್ಟು ಪ್ರಕರಣಗಳಲ್ಲಿ ಯಾರನ್ನೂ ಬಂಧಿಸಿಲ್ಲವಂತೆ. “ಕಳೆದ ಒಂದು ದಶಕಲದಲ್ಲಂತೂ ನನಗೆ ಗೊತ್ತಿರುವಂತೆ ವಿದ್ಯುತ್ ಸಂಪರ್ಕಕ್ಕೆ ಬಂದು ಆನೆ ಮೃತಪಟ್ಟ ಯಾವುದೇ ಪ್ರಕರಣದಲ್ಲಿಯೂ ಯಾರಿಗೂ ಶಿಕ್ಷೆಯಾಗಿಲ್ಲ,” ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ತಾಪಮಾನ ಬದಲಾವಣೆ ಇಲಾಖೆಯ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಅವರು, ಆನೆಗಳನ್ನು ರಕ್ಷಿಸಲು, ಅವುಗಳ ವಾಸಸ್ಥಾನ ಮತ್ತು ಓಡಾಡುವ ಸ್ಥಳದ ಸಂರಕ್ಷಣೆ, ಮಾನವ-ಆನೆ ನಡುವಿನ ಸಂಘರ್ಷದ ಸಮಸ್ಯೆಯನ್ನು ಸಂಬೋಧಿಸಲು ಹಾಗೂ ಸೆರೆಹಿಡಿದಿರುವಂತಹ ಆನೆಗಳ ಆರೈಕೆ ಮತ್ತು ಪೋಷಣೆಗಾಗಿ ಆನೆಗಳಿರುವ ಶ್ರೇಣಿ  ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪ್ರಾಯೋಜಿತ ‘ಪ್ರಾಜೆಕ್ಟ್ ಎಲಿಫೆಂಟ್’ ಯೋಜನೆಯಡಿ ಹಣಕಾಸು ಹಾಗೂ ತಾಂತ್ರಿಕ ನೆರವನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

“ಈ ಯೋಜನೆಯಡಿ ಆನೆಗಳಿಂದ ಸಂಭವಿಸುವಂತಹ ಮಾನವ ಸಾವು/ ಗಾಯ ಹಾಗೂ ಆಸ್ತಿ ಹಾಗೂ ಬೆಳೆ ನಷ್ಟಗಳಿಗೆ ಪರಿಹಾರವನ್ನೂ ನೀಡಲಾಗುತ್ತಿದೆ. ಆನೆಗಳು ಹಾಗೂ ಇತರೆ ವನ್ಯಜೀವಿಗಳ ಮೇಲೆ, ವಿದ್ಯುತ್ ಲೈನ್‌ಗಳು ಇತರೆ ಮೂಲಭೂತಸೌಕರ್ಯಗಳಿಂದಾಗಿ ಸಂಭವಿಸುವಂತಹ ಪರಿಣಾಮಗಳನ್ನು ಕಡಿಮೆಗೊಳಿಸಲು ಸೂಕ್ತ ಪರಿಸರ-ಸ್ನೇಹಿ ಕ್ರಮಗಳ ಕುರಿತು ಸಲಹೆ ನೀಡಲು ಒಂದು ಕಾರ್ಯಪಡೆಯನ್ನೂ ರಚಿಸಿರುವುದಾಗಿ ಕೇಂದ್ರ ಸಚಿವಾಲಯ ತಿಳಿಸಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿದ್ಯುತ್ ಪ್ರಸಾರ ಮಾಡುವ ಏಜೆನ್ಸಿಗಳಿಗೆ ಸಂಬಂಧಪಟ್ಟ ನಿಯಮ ಹಾಗೂ ನಿಬಂಧನಗಳನ್ನು ಅನುಸರಿಸುವಂತೆ ಹಾಗೂ ವಿದ್ಯುತ್ ಸಂಪರ್ಕದಿಂದ ಸಂಭವಿಸುವ ಆನೆಗಳ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸಲು ವಿದ್ಯುತ್ ಲೈನ್‌ಗಳನ್ನು ನೆಲಮಟ್ಟದಿಂದ ಕನಿಷ್ಠ ಎತ್ತರದಲ್ಲಿ ಸಾಗಿಸುವ ನಿಯಮಗಳನ್ನು ಪಾಲಿಸುವಂತೆ ಕೋರಲಾಗಿದೆ,” ಎಂದು ಬಿಜೆಪಿ ರಾಜ್ಯ ಸಭಾ ಎಂಪಿ ರೂಪಾ ಗಂಗೂಲಿ ಅವರು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Between -2009-19 total – 600 elephants – killed – power connections.