ಬೆಂಗಳೂರು.ಸೆಪ್ಟಂಬರ್,13,2021(www.justkannada.in): ನಟ ಚಿರಂಜೀವಿ ಸರ್ಜಾ ನಿಧನರಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಿದೆ. ನಟ ದೃವ ಸರ್ಜಾರಿಗೆ ಸಹೋದರನ ನೆನಪು ಕಾಡುತ್ತಿದೆ. ಅಣ್ಣನನ್ನ ನೆನೆದು ನಟ ದ್ರುವ ಸರ್ಜಾ ಭಾವುಕರಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಚಿರು ನಿಧನದವರೆಗೂ ಅಣ್ಣ-ತಮ್ಮ ಜೊತೆಯಾಗಿ ಕಳೆದ ಅನೇಕ ಪ್ರೀತಿಯ ಕ್ಷಣಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ‘ಮಿಸ್ ಯೂ ಚಿರು. ನಿನ್ನನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ’ ಎಂದು ಇದಕ್ಕೆ ಅವರು ಕ್ಯಾಪ್ಷನ್ ನೀಡಿದ್ದಾರೆ. ಅವರಿಗೆ ಸಮಾಧಾನ ಮಾಡುವ ರೀತಿಯಲ್ಲಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.