ಮೈಸೂರು,ಅಕ್ಟೋಬರ್,16,2020(www.justkannada.in) : ಮೈಸೂರು ವಿವಿ 100ನೇ ಘಟಿಕೋತ್ಸವದಲ್ಲಿ ವಿವಿಧ ನಿಕಾಯಗಳಲ್ಲಿ ಪಿ.ಎಚ್.ಡಿ, ಸ್ನಾತಕೋತ್ತರ ಪದವಿ, ಸ್ನಾತಕಪದವಿಗೆ ಅರ್ಹರಾದವರ ವಿವರ ಹೀಗಿದೆ. ಕಲಾನಿಕಾಯ
265 ಮಂದಿ ಪಿ.ಎಚ್.ಡಿ ಪದವಿಯನ್ನು ಪಡೆಯಲು ಅರ್ಹರಾಗಿದ್ದಾರೆ. ಇದರಲ್ಲಿ ಕನ್ನಡ 41 ಮಂದಿ, ಅರ್ಥಶಾಸ್ತ್ರ 49, ಇತಿಹಾಸ 31 ಮಂದಿ, ಭಾಷಾಶಾಸ್ತ್ರ 6 ಮಂದಿ, ಇಂಗ್ಲೀಷ್ 13 ಮಂದಿ, ಸಂವಹನ ಮತ್ತು ಪತ್ರಿಕೋದ್ಯಮ 9 ಮಂದಿ, ಸಮಾಜ ಶಾಸ್ತ್ರ 15 ಮಂದಿ, ಸಮಾಜ ಕಾರ್ಯ 5 ಮಂದಿ, ಗಾಂಧಿ ಅಧ್ಯಯನ 7 ಮಂದಿ, ಸಂಸ್ಕೃತ 7 ಮಂದಿ, ಅಭಿವೃದ್ಧಿ ಅಧ್ಯಯನ 90 ಮಂದಿ, ಇತರೆ ವಿಷಯಗಳು 87 ಮಂದಿ ವಿಷಯವಾರು ಪಿ.ಎಚ್.ಡಿ ಪದವಿಗೆ ಅರ್ಹರಾಗಿದ್ದಾರೆ.
ಇವರಲ್ಲಿ 277 ಮಂದಿ ಒಟ್ಟುಪದಕ, ಬಹುಮಾನ ವಿಜೇತರಾಗಿದ್ದಾರೆ. ಸ್ನಾತಕೋತ್ತರ ಪದವಿಗೆ 1699 ಮಂದಿ ಅರ್ಹರಾಗಿದ್ಆರೆ. ಸ್ನಾತಕಪದವಿಗೆ 3190 ಮಂದಿ ಅರ್ಹರಾಗಿದ್ದಾರೆ.4889 ಒಟ್ಟು ಪದವಿಗೆ ಅರ್ಹರಾದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ವಾಣಿಜ್ಯ ನಿಕಾಯ
87 ಮಂದಿ ಪಿ.ಎಚ್.ಡಿ ಪದವಿಗೆ ಅರ್ಹರಾಗಿದ್ದು, 59 ಮಂದಿ ಒಟ್ಟು ಪದಕ, ಬಹುಮಾನ ವಿಜೇತರಾಗಿದ್ದಾರೆ. 3650 ಮಂದಿ ಸ್ನಾತಕೋತ್ತರ ಪದವಿಗೆ ಹಾಗೂ 10592 ಮಂದಿ ಸ್ನಾತಕ ಪದವಿಗೆ ಅರ್ಹರಾಗಿದ್ದಾರೆ.
ಶಿಕ್ಷಣ ನಿಕಾಯ
29 ಮಂದಿ ಪಿ.ಎಚ್.ಡಿ ಪದವಿಗೆ ಅರ್ಹರಾಗಿದ್ದು, 32 ಮಂದಿ ಒಟ್ಟು ಪದಕ, ಬಹುಮಾನ ವಿಜೇತರಾಗಿದ್ದಾರೆ. 104 ಮಂದಿ ಸ್ನಾತಕೋತ್ತರ ಪದವಿಗೆ, 2240 ಮಂದಿ ಸ್ನಾತಕ ಪದವಿಗೆ ಅರ್ಹರಾಗಿದ್ದಾರೆ.
ಕಾನೂನು ನಿಕಾಯ
14 ಮಂದಿಗೆ ಪಿ.ಎಚ್.ಡಿ ಪದವಿಗೆ, 7 ಮಂದಿ ಒಟ್ಟು ಪದಕ, ಬಹುಮಾನ ವಿಜೇತರಾಗಿದ್ದಾರೆ. 19 ಮಂದಿ ಸ್ನಾತಕೋತ್ತರ ಪದವಿಗೆ, 7 ಮಂದಿ ಸ್ನಾತಕ ಪದವಿಗೆ ಅರ್ಹರಾಗಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ
245 ಮಂದಿ ಪಿಎಚ್.ಡಿ ಪದವಿಗೆ ಆಯ್ಕೆಯಾಗಿದ್ದು, ರಸಾಯನಶಾಸ್ತ್ರದಲ್ಲಿ 25 ಮಂದಿ, ಜೈವಿಕ ತಂತ್ರಜ್ಞಾನದಲ್ಲಿ 29 ಮಂದಿ, ವಿದ್ಯುನ್ಮಾನಶಾಸ್ತ್ರದಲ್ಲಿ 14 ಮಂದಿ, ಜೀವ ರಸಾಯನಶಾಸ್ತ್ರದಲ್ಲಿ 19 ಮಂದಿ, ಮನೋವಿಜ್ಞಾನದಲ್ಲಿ 10 ಮಂದಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ 10 ಮಂದಿ, ಸೂಕ್ಷ್ಮಜೀವಾಣುಶಾಸ್ತ್ರದಲ್ಲಿ 4 ಮಂದಿ, ಭೌತಶಾಸ್ತ್ರದಲ್ಲಿ 9 ಮಂದಿ, ಗಣಕವಿಜ್ಞಾನದಲ್ಲಿ 21 ಮಂದಿ, ಶ್ರವಣಶಾಸ್ತ್ರದಲ್ಲಿ 3 ಮಂದಿ, ಸಸ್ಯಶಾಸ್ತ್ರದಲ್ಲಿ 14 ಮಂದಿ, ಗಣಿತಶಾಸ್ತ್ರದಲ್ಲಿ 17 ಮಂದಿ, ಇತರೆ ವಿಷಯಗಳಲ್ಲಿ 72 ಮಂದಿ ಪಿ.ಎಚ್.ಡಿಗೆ ವಿಷಯವಾರು ಅರ್ಹರಾಗಿದ್ದಾರೆ.
212 ಮಂದಿ ಒಟ್ಟು ಪದಕ ಮತ್ತು ಬಹುಮಾನ ವಿಜೇತರಾಗಿದ್ದಾರೆ. ಸ್ನಾತಕೋತ್ತರ ಪದವಿಗೆ 2499 ಮಂದಿ, ಸ್ನಾತಕ ಪದವಿಗೆ 4364 ಮಂದಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
key words : Mysore Vivi-Event-PhD-Masters Degree-Bachelor’s-Profile