ಮೈಸೂರು,ಜನವರಿ,3,2022(www.justkannada.in): ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ಸಂಸದ ಡಿ.ಕೆ ಸುರೇಶ್ ಮತ್ತು ಸಚಿವ ಅಶ್ವತ್ ನಾರಾಯಣ್ ನಡುವಿನ ಕಿತ್ತಾಟದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಮನಗರವನ್ನ ಜಿಲ್ಲೆಯನ್ನಾಗಿ ಮಾಡಿ ಅಭಿವದ್ದಿ ಮಾಡಿದವನು ನಾನು. ನಾನು ಇಲ್ಲಿ ಇದ್ದೀನಿ. ಅಲ್ಲಿ ಯಾರೂ ವೇದಿಕೆಯಲ್ಲೇ ಗಲಾಟೆ ಮಾಡಿದ್ದಾರೆ. ನಾನು ಜಿಲ್ಲೆಗೆ ಆರೋಗ್ಯ ವಿವಿ ಅನುಮೋದನೆ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಅನುಮೋದನೆ ನೀಡಿದ್ದೆ. ಜಿಲ್ಲೆಗೆ ಅಭಿವೃದ್ಧಿಗಾಗಿ 360 ಕೋಟಿ ರೂ. ಅನುದಾನ ನೀಡಿದ್ದೇ. ನಾನು ಅಧಿಕಾರದಿಂದ ಕೆಳಗಿಳಿಸಿದ್ದಾಗ ಎಲ್ಲವನ್ನು ನಿಲ್ಲಿಸಿಬಿಟ್ಟರು ಎಂದು ಕಿಡಿಕಾರಿದರು.
ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಸಜ್ಜುಗೊಂಡಿರುವ ಹಿನ್ನೆಲೆ ಈ ಬಗ್ಗೆ ಲೇವಡಿ ಮಾಡಿದ ಹೆಚ್.ಡಿಕೆ, ಮೇಕೆದಾಟು ಪಾದಯಾತ್ರೆಯಲ್ಲ ನೂರು ಯಾತ್ರೆ ಮಾಡಲಿ . ಯಾತ್ರೆಸ್ ಸಕ್ಸಸ್ ಆಗುತ್ತಾ. ಇಲ್ವೋ ಗೊತ್ತಿಲ್ಲಾ..ಆದರೆ ನಿಮ್ಮ ಪ್ರತಿಷ್ಟೆಗೆ ರಾಜ್ಯದ ಜನರನ್ನ ಬಲಿ ಕೊಡಬೇಡಿ ಎಂದು ಕಿವಿಮಾತು ಹೇಳಿದರು.
Key words: Ramanagaram – developed – HD Kumaraswamy- criticism -MPs -ministers