ಸಿಎಂ ಸಿದ್ದರಾಮಯ್ಯ ಪತ್ನಿಯವರು ಸೈಟ್ ವಾಪಾಸ್  ನೀಡಿ ಮಾದರಿಯಾಗಿದ್ದಾರೆ- ಡಾ.ಪುಷ್ಪ ಅಮರನಾಥ್

ಮೈಸೂರು,ಅಕ್ಟೋಬರ್,1,2024 (www.justkannada.in): ಸಿಎಂ ಸಿದ್ದರಾಮಯ್ಯ ಪತ್ನಿಯವರು ಇಂದು ಸೈಟ್ ವಾಪಾಸ್ ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ನುಡಿದಿದ್ದಾರೆ.

ಇಂದು  ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುಷ್ಪ ಅಮರನಾಥ್, ಮುಡಾ ನಿವೇಶನ ನನಗೆ ಬೇಡ ಎಂದು ಸಿಎಂ ಸಿದ್ದರಾಮಯ್ಯ ಪತ್ನಿ ವಾಪಾಸ್ ನೀಡಿದ್ದಾರೆ. ಸಿದ್ದರಾಮಯ್ಯ ಧರ್ಮಪತ್ನಿಗೆ ಎಷ್ಟು ನೋವಾಗಿರಬಹುದು. ಈ ರೀತಿಯ ನಿರ್ಧಾರದ ಹಿಂದೆ ಅವರು ತುಂಬಾ ನೋವು ಅನುಭವಿಸಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮನವರು ಯಾವುದೇ ರಾಜಕೀಯ ಸಭೆ ಸಮಾರಂಭದ ವೇದಿಕೆಗೆ ಬಂದವರಲ್ಲ.ಗಂಡನ ರಾಜಕೀಯ ಏಳಿಗೆಯನ್ನ ದೂರದಲ್ಲೇ ನಿಂತು ಸಂತಸಪಡುತ್ತಿದ್ದರು. ಇಂತಹ ಕುಟುಂಬದ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ದ್ವೇಷದ ರಾಜಕಾರಣ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಪತ್ನಿ ಇಂದು ಸೈಟ್ ವಾಪಾಸ್ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸಿಎಂ ಪತ್ನಿಯಾಗಿ ಯಾವುದೇ ಆಸೆ ಆಕಾಂಕ್ಷೆಯನ್ನ ವ್ಯಕ್ತಪಡಿಸಲಿಲ್ಲ. ನಿಜಕ್ಕೂ ಬಿಜೆಪಿ ಜೆಡಿಎಸ್ ನಾಯಕರ ದ್ವೇಷದ ರಾಜಕಾರಣವನ್ನ ನಾವು ಖಂಡಿಸುತ್ತೇವೆ ಎಂದು ಪುಷ್ಪ ಅಮರನಾಥ್ ಹೇಳಿದರು.

Key words: muda case, CM Siddaramaiah, Dr. Pushpa Amarnath